Home
ತಿ.ನರಸೀಪುರ ಸ್ಥಳೀಯ ಸಂಸ್ಥೆಯ ಬಗ್ಗೆ
ತಿ.ನರಸೀಪುರ ಸ್ಥಳೀಯ ಸಂಸ್ಥೆಯು 1996ರಲ್ಲಿ ಪಟ್ಟಣ ಪಂಚಾಯಿತಿಯಾಯಿತು. ಪಟ್ಟಣದ ಜನಸಂಖ್ಯೆ 2001ರ ಜನಗಣತಿಯಂತೆ 9,927. ನಗರದಲ್ಲಿ 11 ವಾರ್ಡ್ ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ ಹಾಗೂ 3 ಜನ ನಾಮನಿರ್ದೇಶನ ಸದಸ್ಯರಿರುತ್ತಾರೆ. ಪಟ್ಟಣವು 0.81 ಚ.ಕಿ.ಮೀ. ವ್ಯಾಪಿಸಿದೆ. ರಾಷ್ಟ್ರೀಯ ಹೆದ್ದಾರಿ 212 ಈ ಪಟ್ಟಣದ ಮೂಲಕ ಹಾದು ಹೋಗಿದೆ. ಪಟ್ಟಣವು ಮೈಸೂರಿನಿಂದ 30 ಕಿ.ಮೀ. ದೂರದಲ್ಲಿದೆ. ಪಟ್ಟಣಕ್ಕೆ ಕಬಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ.
ತಿ. ಎಂದರೆ ತಿರುಮಕೂಡಲು( ಸಂಸ್ಕೃತದಲ್ಲಿ ತ್ರಿಮಕುಟ) ಎಂದರ್ಥ. ಕಾರಣ ಇಲ್ಲಿ ಕಾವೇರಿ, ಕಬಿನಿ ಮತ್ತು ಸ್ಫಟಿಕ ಸರೋವರ ಎಂಬ 3 ನದಿಗಳ ಸಂಗಮವಾಗುತ್ತದೆ ಪಟ್ಟಣವು ಐತಿಹಾಸಿಕ ಕ್ಷೇತ್ರಗಳಾದ ತಲಕಾಡು, ಮುಡುಕುತೊರೆ ಮತ್ತು ಸೋಮನಾಥಪುರ ಗಳಿಗೆ ಹತ್ತಿರದಲ್ಲಿದೆ. ದಕ್ಷಿಣ ಭಾರತದಲ್ಲಿ ಕುಂಭಮೇಳ ನಡೆಯುವ ಏಕೈಕ ಕ್ಷೇತ್ರ ಇದಾಗಿದೆ. ಪಟ್ಟಣದಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ.
A brief note on T.Narasipura Town
Town Panchayat, T.Narasipura was constituted in 1996.It has a population of 9,927 according to the census of 2001. The Town Panchayat has 11 Wards and equal number of Councilors and 3 Nominated Councillors. T.Narasipura TP stretches to an area of 0.81 Sq. KMs. The distance From Mysore 30 KM. Drinking Water supplying to the town from Kabini River.
The first letter "T" of the name (T.Narasipura) refers to Tirumakudalu, the peninsular town (Trimakuta in Sanskrit) at the conferrence of the Kaveri, Kabini and Spatika Sarovara.Close proximity with historical places like Somanathpura, Talakadu, Mudukutore. This is the place in South India where Kumbhamela is held every three years.
ಗಣಕೀಕರಣದ ಬಗ್ಗೆ.
ಪಟ್ಟಣ ಪಂಚಾಯಿತಿಯು 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ.ಸಾರ್ವಜನಿಕ ಕುಂದುಕೊರತೆ ಮತ್ತು ನಿವಾರಣೆ ವಿಭಾಗವನ್ನು ತೆರೆದಿದ್ದು, ಸಾರ್ವಜನಿಕರಿಂದ ಬರುವ ದೂರುಗಳನ್ನು ಆನ್ ಲೈನ್ ಅಪ್ಲಿಕೇಷನ್ ನಲ್ಲಿ ದಾಖಲು ಮಾಡಲಾಗುತ್ತಿದೆ.
COMPUTARIZATION
We are very happy to intimate the citizens of T.Narasipura city that we have computerizes the Birth and Death records from 1990 to till date under state Government KMRP computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility. Public Grievances and Redressal Cell Opened and Complaints which received from publics are registering in Online.
ಘನತ್ಯಾಜ್ಯ ವಸ್ತು ಸಂಗ್ರಹಣೆ
ಪಟ್ಟಣ ಪಂಚಾಯಿತಿಯ -ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು, ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ. ಪಟ್ಟಣದ 8 ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ: 08227-260440 ಸಂಪರ್ಕಿಸುವುದು. ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ.
– ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ತಿ.ನರಸೀಪುರ.
Solid Waste Management
Solid Waste Management is done by Town Panchayat. It is of two package system comprising primary collection, street sweeping and transportation to landfill site. Door-to-Door collections are done in 8 Wards. Citizens have to pay user charges as per the MSW-rules for door-to-door collections. If you have any complaints concerning to solid waste management please call our helpline no: 08227-260440. Help us to keep your city clean and hygienic
– Chief Officer, TP, T.Narasipura.
ಬೀದಿ ದೀಪಗಳ ನಿರ್ವಹಣೆ ಬೀದಿ ದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು.
Street light Management Street light Management has been outsourced. It includes new street connection and repair. If you have any complaints regarding solid waste management please call.
ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು
ಇಂದು ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪಟ್ಟಣ ಪಂಚಾಯಿತಿಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾಯಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು.
ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ:
ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು. ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು. ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು. ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು. ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು. ಪಟ್ಟಣದ ನೈರ್ಮಲ್ಯ ಕಾಪಾಡುವುದು. ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು. ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ. ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ಪಟ್ಟಣದ ಬಡತನ ನಿವಾರಣೆ. ರಸ್ತೆ, ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ, ಉದ್ಯಾನವನ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂಥ ಮೂಲಸೌಕರ್ಯಗಳನ್ನು ಒದಗಿಸುವುದು. ಸ್ಮಶಾಣ ಭೂಮಿ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು. ಜನನ-ಮರಣ ನೋಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ-ಅಂಶಗಳನ್ನು ಒದಗಿಸುವುದು. ಕಸಾಯಿಖಾನೆಗಳ ನಿಯಂತ್ರಣ. ಸರ್ಕಾರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ. ರಸ್ತೆ, ಬೀದಿಗಳ ದುರಸ್ತಿ ಮತ್ತು ನಿರ್ವಹಣೆ. ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ ಸದಾ ತೊಡಗಿರುತ್ತದೆ.
This Page is Maintained by : Sri.V.T. Wilson, Chief Officer Updated Date: 07-05-2012

